ಓಲ್ಡ್ ಮಾಂಕ್ ರಮ್ 1954 ರ ಡಿಸೆಂಬರ್ 19 ರಂದು ಪ್ರಾರಂಭವಾದ ಭಾರತೀಯ ಡಾರ್ಕ್ ರಮ್ ಆಗಿದೆ . 42.8% ನಷ್ಟು ಆಲ್ಕೋಹಾಲ್ ಅಂಶ ಹೊ೦ದಿರುವ ಇದು ವಿಶಿಷ್ಟವಾದ ವೆನಿಲಾ ಪರಿಮಳವನ್ನು ಹೊಂದಿರುವ ಡಾರ್ಕ್ ರಮ್ ಆಗಿದೆ. ಉತ್ತರ ಪ್ರದೇಶದ ಘಜಿಯಾಬಾದ್ನಲ್ಲಿ ಇದನ್ನು ತಯಾರಿಸಲಾಗುತ್ತದೆ . ಈ ರಮ್ ಗೆ ಯಾವುದೇ ಜಾಹಿರಾತಿಲ್ಲ, ಆದರೆ ಇದರ ಜನಪ್ರಿಯತೆ ಜನರ ಬಾಯಿ೦ದ ಬಾಯಿಗೆ ಹರಡಿ ಭಾರತದ ಅತಿಹೆಚ್ಛು ಮಾರಾಟವಾಗುವ ಡಾರ್ಕ್ ರಮ್ ಆಗಿತ್ತು. ಇದನ್ನು ಆರು ಗಾತ್ರದಲ್ಲಿ ಮಾರಾಟಮಾಡಲಾಗುತ್ತದೆ: 90 ಮಿಲಿ, 180 ಮಿಲೀ, 375 ಮಿಲಿ, 500 ಮಿಲೀ, 750 ಮಿಲಿ, ಮತ್ತು 1 ಲೀಟರ್ ಬಾಟಲಿಗಳು. == ಇತಿಹಾಸ == ೧೮೫೫ ರಲ್ಲಿ ಸ್ಕಾಟ್ಲಾ೦ಡ್ ಉದ್ಯಮಿ ಎಡ್ವರ್ಡ್ ಅಬ್ರಹಾಂ ಡೈಯರ್ ( ಜಲಿಯನ್ವಾಲಾ ಬಾಗ್ ಹತ್ಯಾಕಾಂಡದ ಕರ್ನಲ್ ರೆಜಿನಾಲ್ಡ್ ಎಡ್ವರ್ಡ್ ಹ್ಯಾರಿ ಡೈಯರ್ ರ ತಂದೆ ) ಬ್ರಿಟೀಶರಿಗೆ ಮದ್ಯವನ್ನು ಪೂರೈಸಲು ಹಿಮಾಚಲ ಪ್ರದೇಶದ ಕಸೌಲಿಯಲ್ಲಿ ಸಾರಾಯಿ ಭಟ್ಟಿಯೊ೦ದ್ದನ್ನು ಶುರುಮಾಡಿದರು. ನ೦ತರ ಮೋಹನ್ ಮೆಕಿನ್ ಪ್ರೈ. ಲಿಮಿಟೆಡ್ ಆಯಿತು . == ವೈವಿಧ್ಯಗಳು == ಓಲ್ಡ್ ಮಾಂಕ್ ಸುಪ್ರೀಮ್ ರಮ್ ಓಲ್ಡ್ ಮಾಂಕ್ ಗೋಲ್ಡ್ ರಿಸರ್ವ್ ರಮ್ ಓಲ್ಡ್ ಮಾಂಕ್ ರಮ್ ಓಲ್ಡ್ ಮಾಂಕ್ ಡಿಲಕ್ಸ್ ರಮ್ ಓಲ್ಡ್ ಮಾಂಕ್ ವೈಟ್ ರಮ್ ಓಲ್ಡ್ ಮಾಂಕ್ ಲೆಜೆಂಡ್ - ಲಿಮಿಟೆಡ್ ಆವೃತ್ತಿ == ಅಂತಾರಾಷ್ಟ್ರೀಯ == ಓಲ್ಡ್ ಮಾಂಕ್ ಅನ್ನು ಕೆಲವು ವ್ಯಾಪಾರಿಗಳು ರಷ್ಯಾ, ಯುನೈಟೆಡ್ ಸ್ಟೇಟ್ಸ್, ಯುಕೆ, ಜರ್ಮನಿ, ಜಪಾನ್, ಯುಎಇ, ಎಸ್ಟೋನಿಯಾ, ಫಿನ್ಲ್ಯಾಂಡ್, ನ್ಯೂಜಿಲ್ಯಾಂಡ್, ಕೆನಡಾ, ಕೀನ್ಯಾ, ಜಾಂಬಿಯಾ, ಕ್ಯಾಮರೂನ್, ಸಿಂಗಾಪುರ್ ಮತ್ತು ಮಲೇಷಿಯಾದಲ್ಲಿ ಮಾರಾಟ ಮಾಡುತ್ತಾರೆ . == ==